ಮಹಾತ್ಮ ಗಾಂಧಿ

Wikiquote ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
 • ಜಗತ್ತು ಹೇಗೆ ಬದಲಾಗಬೇಕೆಂದು ಬಯಸುತ್ತೀಯೋ ಹಾಗೆ ಬದಲಾಗು
 • ಕಣ್ಣಿಗೆ ಕಣ್ಣು ಎನ್ನುವುದು ಇಡೀ ವಿಶ್ವವನ್ನು ಅಂಧವಾಗಿಸುವುದರಿಂದಲೇ ಕೊನೆಗೊಳ್ಳುವುದು
 • ಮಾನವೀಯತೆಯ ಮೇಲೆ ನಂಬಿಕೆ ಕಳೆದುಕೊಳ್ಳ ಬಾರದು. ಮಾನವೀಯತೆಯ ಸಾಗರ. ಕೇವಲ ಕೆಲವು ಹನಿಗಳು ಮಲಿನವಾಗಿದ್ದ ಮಾತ್ರಕ್ಕೆ ಇಡೀ ಸಾಗರವು ಮಲಿನವಾಗುವುದಿಲ್ಲ.
 • ಮಾನವನು ತನ್ನ ಯೋಚನೆ ಮತ್ತು ಕ್ರಿಯೆಯ ಮೊತ್ತವಾಗಿರುತ್ತಾನೆ.
 • ದೇಶದ ಸಂಸ್ಕೃತಿಯು ಜನರ ಹೃದಯ ಮತ್ತು ಆತ್ಮದಲ್ಲಿರುತ್ತದೆ.
 • ಸಾಸುವೆಯಷ್ಟು ಕಾರ್ಯವು ಬೆಟ್ಟದಷ್ಟು ಪ್ರವಚನಕ್ಕಿಂತ ಉತ್ತಮ.
 • ನೆಡುವಳಿಕೆಯು ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.
 • ಹಲವು ಬಾರಿ ಹೇಳುವುದರಿಂದ ಸುಳ್ಳು ಸತ್ಯವಾಗುವುದಿಲ್ಲ; ಹಾಗೆಯೇ ಯಾರೂ ಗುರುತಿಸದಿದ್ದ ಮಾತ್ರಕ್ಕೆ ಸತ್ಯ ಸುಳ್ಳಾಗುವುದಿಲ್ಲ.
 • ದುಡಿಯದೆ ಉಣ್ಣುವವನೂ ಕಳ್ಳನೇ. - ೦೪:೫೦, ೩೦ ಮೇ ೨೦೧೪ (ಊಟ್ಛ್) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮನುಷ್ಯನಿಗೆ ಅವನ ಕೈಗಳಿಗಿಂತ ಅಮೂಲ್ಯವಾದ ಆಸ್ತಿ ಇಲ್ಲ. - ೧೮:೦೦, ೧೩ ಮಾರ್ಚ್ ೨೦೧೪ (ಊಟ್ಛ್) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಯಾರನ್ನೋ ಮೆಚ್ಚಿಸಲು, ಯಾವುದೇ ಸಮಸ್ಯೆ ಬಾರದಂತೆ ಮಾಡಲು, ‘ಆಯ್ತು ಸ್ವಾಮಿ’ ಎನ್ನುವುದಕ್ಕಿಂತ ಶುದ್ಧ ಮನಸ್ಸಿನಿಂದ ‘ನಾನಿದನ್ನು ಮಾಡಲಾರೆ’ ಎನ್ನುವುದು ಒಳಿತು. - ೦೬:೩೨, ೧೦ ಜೂನ್ ೨೦೧೪ (ಊಟ್ಛ್) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಬದುಕಿದ್ದಷ್ಟು ದಿನ ಕಾರ್ಯಪ್ರವೃತ್ತನಾಗಿರಬೇಕು. - ೦೭:೨೭, ೧೨ ಜೂನ್ ೨೦೧೪ (ಊಟ್ಛ್) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ದೇವರಿಗೆ ಧರ್ಮವಿಲ್ಲ. - ೦೭:೨೪, ೪ ಜುಲೈ ೨೦೧೪ (ಊಟ್ಛ್) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಸೋಮಾರಿತನ ಅನ್ನುವುದೂ ಒಂದು ಹಿಂಸೆ - ೧೬:೪೨, ೭ ಜುಲೈ ೨೦೧೪ (ಊಊಟ್ಟ್ಛ್ಛ್) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ತರ್ಕವು ಕೇವಲ ಬುದ್ಧಿಯ ವಿಷಯ. ಬುದ್ಧಿಯ ವಿಷಯವನ್ನು, ಹೃದಯ ಒಪ್ಪದಿದ್ದರೆ ಅದನ್ನು ತ್ಯಜಿಸಬೇಕು. - ೦೬:೩೧, ೧೯ ಸೆಪ್ಟೆಂಬರ್ ೨೦೧೪ (ಊಊಟ್ಟ್ಛ್ಛ್) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಜಗತ್ತಿನಲ್ಲಿ ಶಾಂತಿ ನೆಲೆಸಬೇಕೆಂದರೆ ಮಕ್ಕಳಿಗೆ ಮೊದಲು ಶಿಕ್ಷಣ ನೀಡಬೇಕು. - ೦೫:೧೮, ೨೮ ನವೆಂಬರ್ ೨೦೧೪ (ಊಟ್ಛ್) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಸತ್ಯಶೋಧಕನು ದೂಳಿನ ಕಣಕ್ಕಿಂತಲೂ ನಮ್ರನಾಗಿರಬೇಕು. - ೦೯:೨೭, ೨೫ ಫೆಬ್ರುವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.