ವಿಷಯಕ್ಕೆ ಹೋಗು

ಆಯ್ನ್ ರ್‍ಯಾಂಡ್

ವಿಕಿಕೋಟ್ದಿಂದ
ಆಯ್ನ್ ರ್‍ಯಾಂಡ್ ೧೯೫೭
  • ಶ್ರೇಷ್ಟತೆ ಎಂದರೇನು ? ಮೂರು ಮೂಲಮೌಲ್ಯಗಳ ಅನುಗುಣವಾಗಿ ಬದುಕು ನಡೆಸುವುದು.... ಕಾರಣ -ಉದ್ದೇಶ-ಆತ್ಮಗೌರವ
  • ಕಮ್ಮ್ಯೂನಿಸಂ ಮತ್ತು ಸಮಾಜವಾದದ ಮಧ್ಯೆ ಹೆಚ್ಚು ವ್ಯತ್ಯಾಸವಿಲ್ಲ್ಲ - ಕಮ್ಯೂನಿಸಂ ಬಲಪ್ರಯೋಗದಿಂದ ಜನರನ್ನು ಗುಲಾಮರನ್ನಾಗಿಸುತ್ತದೆ, ಸಮಾಜವಾದ ಮತಚಲಾವಣೆಯಿಂದ ಅಷ್ಟೇ. ಕೊಲೆ ಮತ್ತು ಆತ್ಮಹತ್ಯೆಗಳ ಮಧ್ಯದ ವ್ಯತ್ಯಾಸವೇ ಸರಿ.
  • ೨೦ ಶತಮಾನದ ಅತಿ ದೊಡ್ಡ ದುರಂತ ಜನ ನಂಬುವ ತತ್ವದ್ದು, ಸಿದ್ಧಾಂತದ್ದು.
  • ನಾನು ಇದ್ದೇನೆ. ನಾನು ಯೋಚಿಸುತ್ತೇನೆ. ನಾನು ಮಾಡುತ್ತೇನೆ.
  • ಅಮೇರಿಕೆ ಸಿರಿವಂತ ದೇಶವಾದದ್ದು ಜನಸಾಮಾನ್ಯರ ತ್ಯಾಗದಿಂದಲ್ಲ, ಮುಕ್ತವಾಗಿ ಜನರು ತಮ್ಮ ಆಸಕ್ತಿ ಮತ್ತು ಶ್ರಮವನ್ನು ತಮ್ಮ ಇಚ್ಛೆಗೆ ಅನುಸಾರವಾಗಿ ಬಳಸಿ ತಯಾರಿಕೆಯಲ್ಲಿ ತೊಡಗಿ, ತಮ್ಮ ಬದುಕನ್ನು, ತಮ್ಮ ಭವಿಷ್ಯ ಮತ್ತು ತಮ್ಮ ಆಸ್ತಿಯನ್ನು ಸಂಪಾದಿಸಿಕೊಂಡದ್ದರಿಂದ. ಕಾರ್ಖಾನೆಗಳು ಜನರಿಗೆ ಉದ್ಯೋಗ, ಹೆಚ್ಚಿನ ವೇತನ, ಕಡಿಮೆ ಬೆಲೆಗೆ ವಸ್ತುಗಳನ್ನು ನೀಡಿವೆ. ಪ್ರತಿಯೊಂದು ಮಷೀನು, ಪ್ರತಿಯೊಂದು ಹೊಸ ಆವಿಷ್ಕಾರ ಜನರನ್ನು, ಅವರ ಬದುಕನ್ನು ಹಸನುಗೊಳಿಸಿದೆ.
  • ಬಂದೂಕು ಬಳಸುವುದು ವಾದವಲ್ಲ.
  • ಬಲಪ್ರಯೋಗದಿಂದ ಸಮಾಜಕ್ಕೆ ಒಳಿತು ಮಾಡುವುದು, ಮನುಷ್ಯನನ್ನು ಕುರುಡಾಗಿಸಿ ನಂತರ ಅವನನ್ನು ಕಲಾಶಾಲೆಗೆ ಒಯ್ಯುವುದೇ ಸರಿ.